ಟಗರು ಚಿತ್ರದ 25ನೇ ದಿನದ ವಿಜಯೋತ್ಸವಕ್ಕೆ ದಾವಣಗೆರೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರೋಡ್ ಶೋ ನಡೆಸಿದರು. ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಅಶೋಕ ಚಿತ್ರಮಂದಿರದವರೆಗೂ ರೋಡ್ ಶೋ ನಡೆಸಿ, ಅಭಿಮಾನಿಗಳಿಗೆ ಖುಷಿಯಿಂದ ಕೈ ಬೀಸಿ ಸಂತಸ ವ್ಯಕ್ತಪಡಿಸಿದರು. ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿರುವ ಮೆಚ್ಚಿನ ನಟನನ್ನು ನೋಡಲು ಬಂದ ನೂರಾರು ಅಭಿಮಾನಿಗಳನ್ನು ನಿಯಂತ್ರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇನ್ನೂ ಅಶೋಕ ಚಿತ್ರಮಂದಿರದ ಮುಂಭಾಗ ಬರುತ್ತಿದ್ದಂತೆ ರೈಲ್ವೇ ಗೇಟ್ ಹಾಕಿದ್ದರಿಂದ ಸ್ವಲ್ಪ ಕಾಲ ಬಿಸಿಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಹ್ಯಾಟ್ರಿಕ್ ಹೀರೋ ಗೆ ಎದುರಾಯಿತು.